‘ಈ ಕೆಂಪೇಗೌಡ ನಗರ’ ಆರಂಭ
Posted date: 04 Thu, Jul 2013 – 02:17:25 PM
ಬೆಂದಕಾಳೂರಿನ ಸ್ಥಾಪಕ ಕೆಂಪೇಗೌಡ ಯಾರಿಗೆ ತಾನೇ ಸ್ಪೂರ್ತಿ ಅಲ್ಲ! ಕೆಂಪೇಗೌಡನ ಊರು ಈಗ ಬೆಂಗಳೂರು ಆಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಂಗೊಳಿಸುತ್ತಿದೆ. ಹೊಸಬರ ಚಿತ್ರದಲ್ಲಿ ಶಾಸಕಿ ಆಗಿ ಈಗ ಕರ್ನಾಟಕ ರಾಜ್ಯದ ಮಂತ್ರಿಯೂ ಆಗಿರುವ ಉಮಾಶ್ರೀ ಅವರು ಅಭಿನಯಿಸುತ್ತಿದ್ದಾರೆ. ಮಂತ್ರಿಯಾದ ಮೇಲೆ ಒಪ್ಪಿಕೊಂಡ ಮೊದಲ ಚಿತ್ರ ಶ್ರೀಮತಿ ಉಮಾಶ್ರೀ ಅವರದು. 
ಇದೀಗ ಕೆಂಪೇಗೌಡರ ಹೆಸರಿನ ಮತ್ತೊಂದು ಚಿತ್ರ ಅವರ ಜನುಮದಿನ ಆರಂಭವಾಗಿದೆ. ಅದೇ ‘ಫ್ರೆಂಡ್ಸ್ ಸಿನೆ ಕ್ರಿಯೇಷನ್ ಅಡಿಯಲ್ಲಿ ಆರಂಭವಾಗಿರುವ ‘ಈ ಕೆಂಪೇಗೌಡ ನಗರ’. ಹಳ್ಳಿಯ ಮುಗ್ಧ ಬೆಂಗಳೂರಿಗೆ ಬಂದು ಅನುಭವಿಸುವ ಅನೇಕ ಮಜಲುಗಳನ್ನು ಸುಂದರ್ ಪಾಟೀಲ್ ಅವರ ನಿರ್ಮಾಣದಲ್ಲಿ ಚಾಲನೆಗೊಂಡಿದೆ. ಈ ಚಿತ್ರದಿಂದ ಎಂಟು ವರ್ಷಗಳಿಂದ ಸಹಾಯಕ ನಿರ್ದೇಶಕನಾಗಿ ಎಸ್ ನಾರಾಯಣ್, ವಿಕ್ಟರಿ ವಾಸು ಬಳಿ ಕೆಲಸ ಮಾಡಿದ ಕುಮಾರ್ ಸ್ವತಂತ್ರ ನಿರ್ದೇಶಕ ಪಟ್ಟ ಆಕ್ರಮಿಸಲಿದ್ದಾರೆ. ಒಂದೇ ಹಂತದಲ್ಲಿ ಚಿತ್ರೀಕರಣ ಮಾಡುವ ಯೋಚನೆ ನಿರ್ದೇಶಕರದ್ದು. 
ಯೋಗಪ್ರಸಾದ್ ಹಾಗೂ ಮಂಗಳೂರಿನ ಬೆಡಗಿ ಶ್ವೇತ ಪ್ರಮುಖ ತಾರಾಗಣದಲ್ಲಿ ಇದ್ದಾರೆ. ಇವರಿಬ್ಬಿರಿಗೂ ಇದು ಮೊದಲ ಸಿನೆಮಾ. ಡೈಲಾಗ್ ಕಿಂಗ್ ಸಾಯಿಕುಮಾರ್ ಅವರು ಎ.ಸಿ. ಪಿ ಆಗಿ ಅಭಿನಯಿಸುತ್ತಿದ್ದಾರೆ.

ಎಸ್ ಮನೋಹರ್ ಅವರ ಛಾಯಾಗ್ರಹಣ, ವಿನಯ್ ಚಂದ್ರ ಅವರ ಸಂಗೀತ, ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ ಹಾಗೂ ಅಲ್ಟಿಮೇಟ್ ಶಿವು ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕೆ ಇದೆ. ಶಂಕರ್ ಅವರ ಸಂಭಾಷಣೆ, ಕೆ ಕಲ್ಯಾಣ್, ನಾಗೇಂದ್ರ ಪ್ರಸಾದ್ ಹಾಗೂ ಕವಿರಾಜ್ ಅವರ ಸಾಹಿತ್ಯ ಒದಗಿಸಿದ್ದಾರೆ. 
ಪೋಷಕ ಕಲಾವಿದರಲ್ಲಿ ಶೋಬಾರಾಜ್, ಹರೀಶ್ ರಾಯ್, ಉಮಾಶ್ರೀ, ಕಿಲ್ಲರ್ ವೆಂಕಟೇಶ್, ಲಕ್ಷ್ಮಣ್, ಉಮೇಶ್ ಪಂಡಿತ್, ಶೀಲ, ಲಕ್ಷ್ಮಿ ಹಾಗೂ ನಿಕಿತ ಇದ್ದಾರೆ. 
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed